Chief Editor
Manohar. R (Manu)
Photo Journalist
chitrataramanu@gmail.com
+91 9845549026
ತೆಲುಗಿನ ಸೂಪರ್ ಸ್ಟಾರ್ ನಟ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ ``ಆದಿಪರ್ವ``ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ
Posted date: 05 Tue, Mar 2024 12:51:02 PM
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ "ಆದಿಪರ್ವ" ಚಿತ್ರವನ್ನು, ಸಂಜೀವ್ ಕುಮಾರ್ ಮೆಗೋಟಿ ನಿರ್ದೇಶಿಸಿದ್ದಾರೆ. ರವಿ ಕಿರಣ್ ನಿರ್ದೇಶನದ "ಬದುಕು" ಚಿತ್ರಕ್ಕೆ ಚಿತ್ರಕಥೆ - ಸಂಭಾಷಣೆ ಬರೆಯುವ ಮೂಲಕ ಕನ್ನಡಿಗರಿಗೆ ಪರಿಚಯರಾದ ಸಂಜೀವ್ ಕುಮಾರ್ ಮೆಗೋಟಿ,  ಪೂಜಾ ಗಾಂಧಿ ಅಭಿನಯದ "ಆಪ್ತ", "ದಂಡು", "ಕ್ಯೂ", ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಕಳೆದ 8 ವರ್ಷಗಳಲ್ಲಿ ತೆಲುಗು ಮತ್ತು ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸುಮಾರು 50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕಥೆ – ಚಿತ್ರ ಕಥೆಯನ್ನು ನೀಡುವುದರ ಜೊತೆಗೆ, ತಮ್ಮದೇ ಬ್ಯಾನರ್ ಅಡಿಯಲಿ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದಾರೆ. ಬಹಳ ದಿನಗಳ ನಂತರ ಹಿರಿತೆರೆಗೆ ಮರಳಿದ್ದಾರೆ. 

ಅನ್ವಿಕ ಆರ್ಟ್ಸ್ ಮತ್ತು ಅಮೇರಿಕಾ – ಇಂಡಿಯಾ ಎಂಟರ್‌ಟೈನ್‌ಮೆಂಟ್ (ಎ.ಐ ಎಂಟರ್‌ಟೈನ್‌ಮೆಂಟ್ ) ಬ್ಯಾನರ್ ಅಡಿಯಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ "ಆದಿಪರ್ವ" ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ.

ಮಂಚು ಲಕ್ಷಿ, ಎಸ್ತರ್, ಸತ್ಯಪ್ರಕಾಶ್ ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಮರಾಠಿ ಮತ್ತು ಹಿಂದಿ ಚಿತ್ರರಂಗದ ಕಲಾವಿದರು ಈ ಚಿತ್ರದಲ್ಲಿ  ಅಭಿನಯಿಸಿದ್ದಾರೆ. 

ಕನ್ನಡದವರಾದ ಹರೀಶ್ ಅವರ ಛಾಯಗ್ರಹಣವಿರುವ "ಆದಿಪರ್ವ" ಚಿತ್ರಕ್ಕೆ ರಾಮ್ ಸುಧಿ (ಸುಧೀಂದ್ರ) ಆದಿ ಪರ್ವ ಚಿತ್ರಕ್ಕೆ    ಸಂಭಾಷಣೆ ಮತ್ತು ಸಾಹಿತ್ಯವನ್ನು ರಚಿಸಿದ್ದಾರೆ. 

ಬಹು ತಾರಾಗಣದಲ್ಲಿ ಸಿದ್ಧವಾಗಿರುವ "ಆದಿಪರ್ವ" ಸಿನಿಮಾ ಎರಡು ಭಾಗಗಳಲ್ಲಿ ಪ್ರೇಕ್ಷಕರನ್ನು ತಲುಪಲಿದೆ. ಮಾರ್ಚ್ 8 ಮಹಾ ಶಿವರಾತ್ರಿ ಹಬ್ಬದಂದು,  ಚಿತ್ರದ ಟ್ರೇಲರ್ ಹಾಗೂ ಒಂದು ಹಾಡುನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಚಿತ್ರತಂಡವಿದೆ. ಏಪ್ರಿಲ್ ಎರಡನೇ ವಾರದಲ್ಲಿ 5 ಭಾಷೆಗಳಲ್ಲಿ ಈ ಪ್ಯಾನ್ ಇಂಡಿಯಾ ಚಿತ್ರ ತೆರೆಗೆ ಬರಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ತೆಲುಗಿನ ಸೂಪರ್ ಸ್ಟಾರ್ ನಟ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ ``ಆದಿಪರ್ವ``ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ - Chitratara.com
Copyright 2009 chitratara.com Reproduction is forbidden unless authorized. All rights reserved.